ವಿದ್ಯುತ್ ಸ್ಥಾವರಗಳ ಪರಿಣಾಮಗಳು

ಕಲ್ಲಿದ್ದಲು ಆಧಾರಿತ ಘಟಕಗಳಿಂದ ಪರಿಸರ ಮತ್ತು ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳು

 

ಗಾಳಿ ನೀರು ಮಣ್ಣು ಜನರ ಮೇಲೆ ಪರಿಣಾಮ

 

ಉಸಿರಾಟ ಕಾಯಿಲೆಗಳಿಗೆ ಕಾರಣವಾಗುತ್ತದೆ. ಐತಿಹಾಸಿಕ  ಸ್ಮಾರಕ ಮತ್ತು  ಕಟ್ಟಡಗಳ ಮೇಲೆ ದುಷ್ಪರಿಣಾಮ. ಹವಾಮಾನ ಬದಲಾವಣೆಗೆ ಕಾರಣವಾಗುತ್ತದೆ.

 

ನೀರಿನ ಗುಣಮಟ್ಟಕ್ಕೆ ಹಾನಿಯನ್ನು ಉಂಟುಮಾಡುತ್ತದೆ ಮತ್ತು ಇದರಿಂದಾಗಿ ಮಾನವ ಬಳಕೆಗಾಗಿ ಲಭ್ಯವಿರುವ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ.

 

ಸಮುದ್ರದ ನೀರು ಬಿಸಿಯಾಗುವುದರಿಂದ ಮೀನುಗಾರಿಕೆಗೆ ಬಾಧೆಯುಂಟುಮಾಡುತ್ತದೆ. ಸಮುದ್ರ ಪ್ರಬೇಧಗಳ ಸಾವಿಗೆ ಅಥವಾ ವಲಸೆಗೆ ಕಾರಣವಾಗುತ್ತದೆ.

 

ಮಣ್ಣಿನ ಕ್ಷಾರೀಯತೆ ಹೆಚ್ಚಳದಿಂದ ಕೃಷಿ ಬೇಸಾಯವನ್ನುಮಿತಿಗೊಳಿಸುತ್ತದೆ.

 

ಕೃಷಿ ಸಾಗುವಳಿಗೆ ಬೇಕಾಗುವ ಭೂಮಿ ಕಡಿಮೆಗೊಳ್ಳುವುದರಿಂದ ಬೇಸಾಯವನ್ನು ಕಡಿಮೆಮಾಡುತ್ತದೆ.

 

ಸಸ್ಯ ಬೆಳವಣಿಗೆಗೆ ಪರಿಣಾಮ ಬೀರುತ್ತದೆ.

 

ರೈತರ ಮತ್ತು ಮೀನುಗಾರರ ಜೀವನೋಪಾಯದ ಮೇಲೆ

ಪರಿಣಾಮ ಬೀರುತ್ತದೆ.

 

ಅಪಾಯಕಾರಿ ಕೆಲಸದ ಪರಿಸ್ಥಿತಿಗಳ ಕಾರಣದಿಂದಾಗಿ ಅಪಘಾತಗಳ ಅಪಾಯವನ್ನು ಹೆಚ್ಚಿಸುತ್ತದೆ

 

 

ಕಲ್ಲಿದ್ದಲನ್ನು ತೊಳೆಯಲು ಬಳಸುವ ನೀರು, ನೇರವಾಗಿ ಜಲಾಶಯಗಳಿಗೆ ಹರಿ ಬಿಟ್ಟಲ್ಲಿ, ಅವುಗಳನ್ನು ಕಲುಷಿತಗೊಳಿಸುತ್ತದೆ. ಈ ಘಟಕಗಳಿಂದ ಹಾರುವ ಬೂದಿ ಭೂಮಿಯ ಮೇಲೆ ಸ್ಥಿರಗೊಂಡಲ್ಲಿ ಮಣ್ಣನ್ನು ಕಲುಷಿತಗೊಳಿಸುತ್ತದೆ. ಈ ಸಸ್ಯಗಳಿಂದ ಹೊರಸೂಸುವ ಗಾಳಿ, ಸಲ್ಫರ್ ಡೈಆಕ್ಸೈಡ್, ನೈಟ್ರೋಜನ್ ಆಕ್ಸೈಡ್, ಕಣ ರೂಪದ ವಸ್ತುಗಳು, ಕಾರ್ಬನ್ ಮೊನಾಕ್ಸೈಡ್, ಬಾಷ್ಪಶೀಲ ಸಾವಯವ ಸಂಯುಕ್ತಗಳು ಮತ್ತು ಪಾದರಸದಂತಹ ಇತರ ಲೋಹಗಳು ಮಾಲಿನ್ಯಕಾರಕಗಳನ್ನು ಒಳಗೊಂಡಿರುವುದರಿಂದ, ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. 4

 

ಪರಿಣಾಮಗಳ ಸ್ವರೂಪ ಮತ್ತು ಗುಣಲಕ್ಷಣಗಳ ಆಧಾರದ ಮೇಲೆ ನಾಲ್ಕು ರೀತಿಯ ಪರಿಸರ ಪರಿಣಾಮಗಳು ಉಂಟಾಗುತ್ತವೆ:

 

•   ನೇರ ಪರಿಣಾಮ - ಉದಾ: ವಿದ್ಯುತ್ ಘಟಕದಿಂದ ಸಂಸ್ಕರಿಸಲಾರದ ತ್ಯಾಜ್ಯ ನೀರನ್ನು ನದಿ ಅಥವಾ ಹಳ್ಳಕ್ಕೆ ಹರಿಬಿಟ್ಟಲ್ಲಿ ಜಲಚರ ಜೀವಿಗಳ ಮೇಲೆ ಪ್ರಭಾವ ಬೀರುತ್ತದೆ.

 

•   ಪರೋಕ್ಷ ಪರಿಣಾಮ -  ಉದಾ: ವಿದ್ಯುತ್ ಘಟಕದಿಂದ ಹೊರಬೀಳುವ ಸಲ್ಫರ್ ಡೈಆಕ್ಸೈಡ್ (SO2 ) ನಂತರ ಮಣ್ಣಿನ ಮೇಲೆ ಸಲ್ಫರ್ ಟೆಟ್ರಾಕೈಡ್ (SO4 ) ಆಗಿ  ಸಂಗ್ರಹಗೊಂಡಲ್ಲಿ ಕೃಷಿಗೆ ದುಷ್ಪರಿಣಾಮ ಬೀರುತ್ತದೆ.

 

• ಸಂಚಿತ ಪರಿಣಾಮ- ಉದಾ: ಒಂದು ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಮತ್ತು ಮುಂಬರುವ ಯೋಜನೆಗಳ ಎಲ್ಲಾ ಹೊರಸೂಸುವಿಕೆಗಳ ಸಂಯುಕ್ತ ಪ್ರಭಾವ

 

•  ಪ್ರೇರಿತ ಪರಿಣಾಮ - ಉದಾ: ಆ ಪ್ರದೇಶದ ಭೂ ಬಳಕೆ ವಿಧಾನ ಮತ್ತು ಜನಸಂಖ್ಯೆಯ ಮೇಲೆ ವ್ಯತ್ಯಾಸವಾಗುತ್ತದೆ ಏಕೆಂದರೆ ಘಟಕವು ಅಲ್ಲಿನ ನೀರು ಮತ್ತು ಗಾಳಿಯಂತಹ ಸ್ವಾಭಾವಿಕ ಸಂಪನ್ಮೂಲಗಳ ಮೇಲೆ ಪರಿಣಾಮ ಬೀರುತ್ತದೆ.

 

ಪರಿಸರ ಪರಿಣಾಮಗಳು

 

 1. ವಾಯು ಮಾಲಿನ್ಯ

 

ಕಲ್ಲಿದ್ದಲು ವಿದ್ಯುತ್ ಸ್ಥಾವರ ಗಾಳಿಯಲ್ಲಿ ಅನೇಕ ಮಾಲಿನ್ಯಕಾರಕಗಳನ್ನು ಹೊರಸೂಸುತ್ತದೆ. ಇವುಗಳಲ್ಲಿ ಸಲ್ಫರ್ ಡಯಾಕ್ಸೈಡ್ (SO), ಕಾರ್ಬನ್ ಮೊನಾಕ್ಸೈಡ್ (CO), ನೈಟ್ರೋಜನ್ನಿನ  ಆಕ್ಸೈಡ್ಗಳು (NOx) ಮತ್ತು ಓಝೋನ್ (O) ಸೇರಿವೆ. ತೇಲುವ ಕಣರೂಪ ವಸ್ತು (SPM), ಸೀಸ ಮತ್ತು  ಮಿಥೇನ್-ಅಲ್ಲದ ಹೈಡ್ರೋಕಾರ್ಬನ್ಸ್ ಗಳೂ ಸಹಿತ ಬಿಡುಗಡೆಗೊಳ್ಳುತ್ತವೆ.

 

 

ಯಾವುದೇ ದಹನ ಪ್ರಕ್ರಿಯೆ NOx ಉತ್ಪನ್ನದ ಮೂಲವೆಂದೇ ಹೇಳಬಹುದು. ಅವು ಇಂಧನದಲ್ಲಿರುವ ಸಾರಜನಕ ಮತ್ತು ಗಾಳಿಯಲ್ಲಿರುವ ಆಮ್ಲಜನಕದ ದಹನ ಕ್ರಿಯೆಯಲ್ಲಿ ರಚಿಸಲ್ಪಡುತ್ತವೆ. ದಹನ ತಾಪಮಾನ ಹೆಚ್ಚಿದಂತೆ NOx ರಚನೆ ಹೆಚ್ಚಳಗೊಳ್ಳುತ್ತದೆ.

 

 

ವಾತಾವರಣದಲ್ಲಿನ ಆಮ್ಲಜನಕದೊಂದಿಗೆ CO ಮಿಶ್ರಣಗೊಂಡು ರಚಿಸಲ್ಪಡುವ - ಕಾರ್ಬನ್ ಡೈಆಕ್ಸೈಡ್ (CO)  ಮತ್ತು  ವಾಯುಮಂಡಲದ ಆಮ್ಲಜನಕದೊಂದಿಗೆ NOx ಸಂಯೋಗದ ಮೂಲಕ ರಚಿತವಾಗುವ ನೈಟ್ರಸ್ ಆಕ್ಸೈಡ್ (N O) - ಪ್ರಮುಖ ಹಸಿರುಮನೆ ಅನಿಲಗಳ ರಚನೆ ಸಹಿತ ಉಂಟಾಗುತ್ತವೆ.

 

 

ಉಷ್ಣ ವಿದ್ಯುತ್ ಕೇಂದ್ರಗಳ ಕಾರ್ಯಕ್ಷಮತೆ ವಿಮರ್ಶೆ 2004-05 ವಿಭಾಗ 14 ಪುಟ ಸಂಖ್ಯೆ. 14.1, ವಿಭಾಗ -14, ವಿದ್ಯುತ್ ವಲಯದಲ್ಲಿ ಪರಿಸರೀಯ ಅಂಶಗಳು

 

 

ಅಂತೆಯೇ, SOx (ಸಲ್ಫರ್ ಆಕ್ಸೈಡ್ ಗಳು) ಇಂಧನದಲ್ಲಿನ ಸಲ್ಫರ್ ಮತ್ತು ಗಾಳಿಯಲ್ಲಿನ ಆಮ್ಲಜನಕದ ಸಂಯೋಜನೆಯಾಗಿರುತ್ತದೆ. ಸಲ್ಫರ್ ಡಯಾಕ್ಸೈಡ್ (SO) ಕಲ್ಲಿದ್ದಲು ವಿದ್ಯುತ್ ಸ್ಥಾವರಗಳಿಂದ ಉಂಟಾಗುವ ಸಾಮಾನ್ಯ ಮಾಲಿನ್ಯಕಾರಕವಾಗಿದೆ.  ಕೆಲವೊಮ್ಮೆ, ಹೆಚ್ಚಿನ ಆಮ್ಲಜನಕದಿಂದಾಗಿ, SO ಸಹ ರೂಪುಗೊಳ್ಳುತ್ತದೆ, ಇದು ವಾತಾವರಣದಲ್ಲಿ ನೀರಿನೊಂದಿಗೆ ಮಿಶ್ರಣಗೊಳ್ಳುತ್ತದೆ, ಇದು ಆಮ್ಲ ಮಳೆಗೆ ಕಾರಣವಾಗುತ್ತದೆ. ಕಲ್ಲಿದ್ದಲು ವಿದ್ಯುತ್ ಸ್ಥಾವರಗಳಿಂದ SPM ಮುಖ್ಯವಾಗಿ ಹೊಗೆಮಸಿ, ಹೊಗೆ ಮತ್ತು ಧೂಳಿನ ಕಣಗಳಾಗಿದ್ದು, ಆಸ್ತಮಾ ಮತ್ತು ಉಸಿರಾಟದ ಕಾಯಿಲೆ ಉಂಟುಮಾಡುತ್ತವೆ.  

 

2. ಜಲ ಮಾಲಿನ್ಯ

ಕಲ್ಲಿದ್ದಲು ವಿದ್ಯುತ್ ಸ್ಥಾವರದಲ್ಲಿ, ಕಲ್ಲಿದ್ದಲು ತೊಳೆಯಲು ನೀರನ್ನು ಬಳಸಲಾಗುತ್ತದೆ ಮತ್ತು ನೀರಿನಿಂದ ಉಗಿ ತಯಾರಿಸಲು ಮತ್ತು ಸಾಧನಗಳನ್ನು ತಂಪುಗೊಳಿಸಲು ಅದನ್ನು ಬಾಯ್ಲರ್ ಕುಲುಮೆಯಲ್ಲಿ ಸುತ್ತಿಸಲಾಗುತ್ತದೆ. ಕಲ್ಲಿದ್ದಲು-ಸ್ವಚ್ಛಗೊಳಿಸಿದ ನೀರಿನ ಧೂಳು ಅಂತರ್ಜಲವನ್ನು ಕಲುಷಿತಗೊಳಿಸುತ್ತದೆ. ಬಿಸಿ ನೀರನ್ನು, ತಂಪುಗೊಳಿಸದೇ ಜಲಾಶಯಗಳಲ್ಲಿ ಹರಿಬಿಟ್ಟಲ್ಲಿ, ತಾಪಮಾನ ಏರುವಿಕೆಗೆ ಕಾರಣವಾಗುತ್ತದೆ ಮತ್ತು ಜಲಚರ ಪ್ರಾಣಿ ಮತ್ತು ಸಸ್ಯಗಳಿಗೆ ಹಾನಿಮಾಡುತ್ತದೆ.

 

 

3. ಭೂ ಸವೆತ

ಕಲ್ಲಿದ್ದಲು ಶಕ್ತಿ ಸ್ಥಾವರಗಳ ಸಂಸ್ಕರಿಸದ ಗಾಳಿ ಮತ್ತು ನೀರಿನ ಮಾಲಿನ್ಯಕಾರಕಗಳು ಸುತ್ತ ಮುತ್ತಲಿನ ಪ್ರದೇಶದ ಭೂಮಿ, ನೀರು ಸಸ್ಯ ಮತ್ತು ಪ್ರಾಣಿಗಳ ಮೇಲೆ ದುಷ್ಪರಿಣಾಮ ಬೀರುತ್ತವೆ. ಇದರಿಂದಾಗಿ ಸುತ್ತ ಮುತ್ತಲಿನ ಪ್ರದೇಶವು ಯಾವುದೇ ರೀತಿಯ ಜೀವನ ಅಥವಾ ಜೀವನೋಪಾಯಕ್ಕೆ ಯೋಗ್ಯವಾಗಿರುವುದಿಲ್ಲ.

 

 

ಆರೋಗ್ಯದ ಪರಿಣಾಮಗಳು 5

 

ರಾಸಾಯನಿಕ ಕಲ್ಮಷಗಳು

ಆರೋಗ್ಯ ಪರಿಣಾಮ

ಸಲ್ಫರ್ ಡಯಾಕ್ಸೈಡ್

 • ಉಸಿರಾಟ ಪ್ರಕ್ರಿಯೆ ಮತ್ತು ಶ್ವಾಸಕೋಶ ಕ್ರಿಯೆ ಗಳಿಗೆ ಬಾಧಿಸುತ್ತದೆ
 • ಆಸ್ತಮಾ ಮತ್ತು ದೀರ್ಘಕಾಲದ ಬ್ರಾಂಕೈಟಿಸ್ ಗೆ ಕಾರಣವಾಗುತ್ತದೆ
 • ಕಣ್ಣು ಉರಿತಕ್ಕೆ ಕಾರಣವಾಗುತ್ತದೆ
 • ಹೃದಯ ರೋಗವನ್ನು ಉಂಟುಮಾಡುತ್ತದೆ

ನೈಟ್ರಸ್ ಆಕ್ಸೈಡ್ ಗಳು

 • ಆಸ್ತಮಾಕ್ಕೆ ಕಾರಣವಾಗುತ್ತದೆ
 • ದೀರ್ಘಕಾಲದ ಶ್ವಾಸಕೋಶ ಪ್ರತಿರೋಧಕ ಕಾಯಿಲೆಗೆ ಕಾರಣವಾಗುತ್ತದೆ.
 • ಶ್ವಾಸಕೋಶದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ
 • ಹೃದಯ ರೋಗವನ್ನು ಉಂಟುಮಾಡುತ್ತದೆ

ಕಣರೂಪ ವಸ್ತುಗಳು (PM)

ದಪ್ಪ ಕಣರೂಪ ವಸ್ತುಗಳು PM10),

ನಯವಾದ ಕಣರೂಪ ವಸ್ತುಗಳು (PM2.5)

 • ಆಸ್ತಮಾಕ್ಕೆ ಕಾರಣವಾಗುತ್ತದೆ
 • ದೀರ್ಘಕಾಲದ ಶ್ವಾಸಕೋಶ ಪ್ರತಿರೋಧಕ ಕಾಯಿಲೆಗೆ ಕಾರಣವಾಗುತ್ತದೆ.
 • ಶ್ವಾಸಕೋಶದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ
 • ಶ್ವಾಸಕೋಶದ ಕ್ಯಾನ್ಸರಿಗೆ ಕಾರಣವಾಗುತ್ತದೆ
 • ಹೃದಯ ರೋಗವನ್ನು ಉಂಟುಮಾಡುತ್ತದೆ
 • ರಕ್ತ ಕಟ್ಟಿ ಹೃದಯಾಘಾತಕ್ಕೆ ಕಾರಣವಾಗುತ್ತದೆ

ಅಮೋನಿಯ

 • ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡುತ್ತದೆ
 • ಚರ್ಮ ಮತ್ತು ಕಣ್ಣಿನ ಉರಿತಕ್ಕೆ ಕಾರಣವಾಗುತ್ತದೆ

ಹೈಡ್ರೋಜನ್ ಕ್ಲೋರೈಡ್ ಮತ್ತು ಫ್ಲೋರೈಡ್

 • ತ್ವಚೆ, ಕಣ್ಣುಗಳು, ಮೂಗು, ಗಂಟಲು, ಉಸಿರಾಟ ದಾರಿಗಳಿಗೆ ಕಿರಿಕಿರಿ ಉಂಟುಮಾಡುತ್ತದೆ

 

 

 

 

 

ರಾಸಾಯನಿಕ ಕಲ್ಮಷಗಳು

ಆರೋಗ್ಯ ಪರಿಣಾಮ

ಡಯಾಕ್ಸಿನ್ಸ್ ಮತ್ತು ಫ್ಯುರನ್

 • ಜಠರ ಕ್ಯಾನ್ಸರ್ ಸಂಭವನೀಯತೆ
 • ಸಂತಾನೋತ್ಪತ್ತಿ, ನಿರ್ನಾಳ ಗ್ರಂಥಿ ಮತ್ತು ರೋಗ ನಿರೋಧಕ ವ್ಯವಸ್ಥೆಗಳ ಮೇಲೆ ದುಷ್ಪರಿಣಾಮ

ಪಾಲಿಸೈಕ್ಲಿಕ್ ಆರೊಮ್ಯಾಟಿಕ್

ಹೈಡ್ರೋಕಾರ್ಬನ್ಸ್

 • ಯಕೃತ್ತು, ಮೂತ್ರಪಿಂಡ ಮತ್ತು ವೃಷಣಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ
 • ವೀರ್ಯಾಣು ಜೀವ ಕೋಶಗಳನ್ನು ಹಾನಿಗೊಳಿಸಬಹುದು ಮತ್ತು ಸಂತಾನೋತ್ಪತ್ತಿಯನ್ನು ದುರ್ಬಲಗೊಳಿಸಬಹುದು
 • ಸಣ್ಣ ಕಣ್ಣರೂಪದ ವಸ್ತುಗಳಿಗೆ ಅಂಟಿಕೊಳ್ಳಬಹುದು ಮತ್ತು ಶ್ವಾಶಕೋಶಗಳಲ್ಲಿ ಶೇಖರಣೆಗೊಳ್ಳಬಹುದು

ಪದರಸ

 • ಮಿದುಳು, ನರಮಂಡಲ ವ್ಯವಸ್ಥೆ, ಮೂತ್ರಪಿಂಡಗಳು ಮತ್ತು ಯಕೃತ್ತಿಗೆ ಹಾನಿಮಾಡಬಹುದು
 • ನರ ಮತ್ತು ಜನ್ಮ ನ್ಯೂನತೆಗಳಿಗೆ ಕಾರಣವಾಗುತ್ತದೆ

ಸೀಸ (ಲೆಡ್)

 • ಮಕ್ಕಳ ನರಮಂಡಲ ವ್ಯವಸ್ಥೆಗೆ ಹಾನಿ ಮಾಡುತ್ತದೆ
 • ಮಕ್ಕಳ ಕಲಿಕೆ, ನೆನಪು ಮತ್ತು ನಡವಳಿಕೆಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ
 • ಮೂತ್ರಪಿಂಡಗಳಿಗೆ ಹಾನಿಮಾಡುತ್ತದೆ
 • ಹೃದಯರಕ್ತನಾಳ ರೋಗಕ್ಕೆ ಕಾರಣವಾಗುತ್ತದೆ
 • ರಕ್ತಹೀನತೆ ಉಂಟುಮಾಡುತ್ತದೆ

ಆಂಟಿಮನಿ, ಆರ್ಸೆನಿಕ್, ಬೆರಿಲಿಯಮ್, ಕ್ಯಾಡ್ಮಿಯಮ್, ಕ್ರೋಮಿಯಂ, ನಿಕೆಲ್

ಸೆಲೆನಿಯಮ್, ಮ್ಯಾಂಗನೀಸ್

 • ಕ್ಯಾನ್ಸರ್ ಕಾರಕಗಳ ಸಂಭವನೀಯತೆ  (ಶ್ವಾಸಕೋಶಗಳು, ಮೂತ್ರಕೋಶ, ಮೂತ್ರಪಿಂಡ, ಚರ್ಮ ಕ್ಯಾನ್ಸರ್)
 • ನರ, ಹೃದಯರಕ್ತನಾಳ, ಚರ್ಮ, ಉಸಿರಾಟ ಮತ್ತು ಪ್ರತಿರಕ್ಷಣಾ ವ್ಯವಸ್ಥೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ

ರೇಡಿಯಮ್

 • ಕ್ಯಾನ್ಸರ್ ಕಾರಕಗಳ ಸಂಭವನೀಯತೆ  (ಶ್ವಾಸಕೋಶ ಮತ್ತು ಮೂಳೆ ಕ್ಯಾನ್ಸರ್)
 • ರಕ್ತಹೀನತೆ ಉಂಟುಮಾಡುತ್ತದೆ
 • ಮೆದುಳಿನ ಊತಕ್ಕೆ ಕಾರಣವಾಗುತ್ತದೆ

ಯುರೇನಿಯಂ

 • ಕ್ಯಾನ್ಸರ್ ಕಾರಕಗಳ ಸಂಭವನೀಯತೆ (ಶ್ವಾಸಕೋಶಗಳು ಮತ್ತು ದುಗ್ಧರಸ ವ್ಯವಸ್ಥೆ)
 • ಮೂತ್ರಪಿಂಡದ ಕಾಯಿಲೆಗೆ ಕಾರಣವಾಗುತ್ತದೆ

 

 

ಶಬ್ದ ಮಾಲಿನ್ಯ

ವಿದ್ಯುತ್ ಸ್ಥಾವರಗಳಲ್ಲಿ ಬಳಸುವ ಸಲಕರಣೆಗಳಾದ ಬಾಯ್ಲರ್, ಟರ್ಬೈನ್, ಕ್ರಶರ್,ಇತ್ಯಾದಿ ಯಂತ್ರಗಳಿಂದ ಹೊರಹೊಮ್ಮುವ ಅತಿ ಹೆಚ್ಚು ಶಬ್ದ ಪ್ರಮಾಣ ಅಥವಾ ತೀವ್ರ ಕರ್ಕಶ ಸದ್ದಿಗೆ ಸದಾ ಒಳಗಾಗುವುದರಿಂದ, ಅಲ್ಲಿ ಕೆಲಸ ಮಾಡುವ ಜನರ ಮೇಲೆ ದುಷ್ಪರಿಣಾಮ ಬೀರುತ್ತದೆ.