Skip to main content
- ದಕ್ಷಿಣ ಭಾರತದಲ್ಲಿನ ತಳಮಟ್ಟದ ಎನ್ಜಿಓಗಳು ಮತ್ತು ಸ್ಥಳೀಯ ಸಮುದಾಯಗಳಿಗೆ, ಅವರ ನೆರೆಹೊರೆಯಲ್ಲಿ ಕಲ್ಲಿದ್ದಲು-ಆಧಾರಿತ ಸ್ಥಾವರಗಳ ಸ್ಥಾಪನೆಗಳಿಗೆ ಸಂಬಂಧಪಟ್ಟ ಘೋಷಣೆಗಳ ಕುರಿತು ಮಾಹಿತಿ ನೀಡುತ್ತೇವೆ ಹಾಗು ಸ್ಥಾವರದ ಈಐಎ-ಸಂಬಂಧಿತ ಕಾಗದಪತ್ರಗಳನ್ನು ಕೋರಿಕೆ ಮೇರೆಗೆ ಅವರೊಂದಿಗೆ ಹಂಚಿಕೊಳ್ಳುತ್ತೇವೆ
- ತಾಂತ್ರಿಕ ತಜ್ಞ, ಪರಿಸರ ವಕೀಲ ಮತ್ತು ಆರ್ಥಿಕ ತಜ್ಞರನ್ನು ಒಳಗೊಂಡ ತಜ್ಞರ ತಂಡವನ್ನು ಬಳಸಿಕೊಂಡು, ಪರಿಸರೀಯ ಪರಿಣಾಮ ನಿರ್ಧರಿಸುವಿಕೆ ಮತ್ತು ಸ್ಥಾವರದ ತೀವ್ರ ಪರಿಣಾಮಗಳನ್ನು ತಗ್ಗಿಸಲು ಕೈಗೊಳ್ಳಲು ಉದ್ದೇಶಿಸಿರುವ ಕ್ರಮಗಳ ಮೇಲೆ ತಾಂತ್ರಿಕ ಮೌಲ್ಯಮಾಪನ ನಡೆಸುತ್ತೇವೆ. ಇದರ ವರದಿಯನ್ನು ತಳಮಟ್ಟದ ಎನ್ಜಿಓಗಳು ಮತ್ತು ಸ್ಥಳೀಯ ಸಮುದಾಯಗಳೊಂದಿಗೆ ಹಂಚಿಕೊಳ್ಳುತ್ತೇವೆ. ಅವರು ಈ ಉದ್ದೇಶಿತ/ಈಗಾಗಲೆ ಇರುವ ಸ್ಥಾವರದ ವಿರುದ್ಧ ಹೋರಾಡಲು ಈ ವರದಿಯ ಅಂಶಗಳನ್ನು ಬಳಸಿಕೊಳ್ಳಬಹುದಾಗಿದೆ.
- ಇಂಗ್ಲೀಷ್, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಮಾಹಿತಿ ಪುಸ್ತಿಕೆಗಲು ಮತ್ತು ಪೋಸ್ಟರ್ ಗಳನ್ನು ಹಂಚುವ ಮೂಲಕ ಈಐಎ ಪ್ರಕ್ರಿಯೆ ಕುರಿತು ಎನ್ಜಿಓಗಳು ಮತ್ತು ಸ್ಥಳೀಯ ಸಮುದಾಯಗಳಲ್ಲಿ ಜಾಗೃತಿ ಮೂಡಿಸುತ್ತೇವೆ
- ಈಐಎ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲಿ ಅವರು ಅಳವಡಿಸಿಕೊಳ್ಳಲು ಸಾಧ್ಯವಾಗಬಹುದಾದ ಮಧ್ಯಸ್ಥಿಕೆಯ ಕಾರ್ಯತಂತ್ರಗಳ ಕುರಿತು, ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಿಂದ ಹಾನಿಗೊಳಗಾದವರನ್ನು/ ಹಾನಿಗೊಳಗಾಗಬಹುದಾದ ಸಂಭಾವ್ಯ ಎನ್ಜಿಓಗಳು ಮತ್ತು ವ್ಯಕ್ತಿಗಳನ್ನು ಸಜ್ಜುಗೊಳಿಸುತ್ತೇವೆ.
- ದಕ್ಷಿಣ ಭಾರತದಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳ ಅಭಿವೃದ್ಧಿ ಮತ್ತು ಬೆಳವಣಿಗೆಗಳ ಕುರಿತು ಪ್ರತಿ ತಿಂಗಳು ಈ- ನ್ಯೂಸ್ಲೆಟರ್ ಪ್ರಕಟಿಸುತ್ತೇವೆ. ಇದು ಪರಿಸರ ಮತ್ತು ಗ್ರಾಹಕ ಸಮೂಹಗಳು, ಗ್ರಾಮ ಪ್ರತಿನಿಧಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳನ್ನು ಸೇರಿದಂತೆ 1000ಕ್ಕೂ ಹೆಚ್ಚು ಚಂದಾದಾರರನ್ನು ತಲುಪುತ್ತದೆ.