ಪ್ರಮುಖ ಪರಿಸರ ಮತ್ತು ಅರಣ್ಯ ಸಚಿವಾಲಯ ಸುತ್ತೋಲೆಗಳು

  1. ಮಾಹಿತಿ ಸಲ್ಲಿಕೆ ಮತ್ತು ಲಭ್ಯತೆ
  2. ಕಲ್ಲಿದ್ದಲು ಸಂಯೋಜನೆ
  3. ಅಲ್ಟ್ರಾ ಮೆಗಾ ವಿದ್ಯುತ್ ಯೋಜನೆಗಳು (ಯುಎಂಪಿಪಿ)
  4. ಈಸಿ/ಎಫ್ಸಿ/ಸಿಆರ್ಝಡ್ ಉಲ್ಲಂಘನೆ
  5. ಸಾರ್ವಜನಿಕ ವಿಚಾರಣೆ
  6. ಅಸ್ತಿತ್ವದಲ್ಲಿರುವ ಸ್ಥಾವರಗಳ ಮೇಲ್ವಿಚಾರಣೆ
  7. ಒಂದೇ ಭೂಮಿಯ ಮೇಲೆ ಯೋಜನೆಗಳು
  8. ಕಾರ್ಪೊರೇಟ್ ಪರಿಸರ ನೀತಿ
  9. ಈಸಿ ಹೊರಡಿಸುವುದಕ್ಕೆ ಮುಂಚೆ ಅನುಮತಿಸಲಾದ ಚಟುವಟಿಕೆಗಳು
  10. ಯೋಜನೆ ವಿಸ್ತರಣೆ
  11. ಟಿಓಆರ್ ಸಿಂಧುತ್ವ
  12. ಪರಸ್ಪರ ಸಂಪರ್ಕ ಹೊಂದಿದ ಯೋಜನೆಗಳು

1. ಮಾಹಿತಿ ಸಲ್ಲಿಕೆ ಮತ್ತು ಲಭ್ಯತೆ

ವೆಬ್ಸೈಟ್ಗೆ ಅಪ್ಲೋಡ್ ಮಾಡುವುದು:

ಟಿಓಆರ್, ಫಾರ್ಮ್ 1 & ಪೂರ್ವ ಕಾರ್ಯಸಾಧ್ಯತಾ ವರದಿಯನ್ನು ಯೋಜನೆಯ ಪ್ರತಿಪಾದಕರಿಗೆ ತಲುಪಿಸುವುದಕ್ಕೆ ಮುಂಚಿತವಾಗಿ ಎಂಒಈಎಫ್ ವೆಬ್ಸೈಟ್ ಮೇಲೆ ಅಪ್ಲೋಡ್ ಮಾಡಬೇಕು. ಇದು ಆಯಾ ಕ್ಷೇತ್ರಕ್ಕೆ ಸಂಬಂಧಪಟ್ಟ ನಿರ್ದೇಶಕರು ಮತ್ತು ಸದಸ್ಯ ಕಾರ್ಯದರ್ಶಿಯ ಜವಾಬ್ದಾರಿ. ಈಐಎ, ಈಎಂಪಿ, ಸಾರ್ವಜನಿಕ ವಿಚಾರಣೆಯ ವಿವರಗಳು, ಈಎಸಿ ವಿವರಗಳು ಮತ್ತು ಈಸಿಯನ್ನು ಯೋಜನೆಯ ಪ್ರತಿಪಾದಕರಿಗೆ ತಲುಪಿಸುವುದಕ್ಕೆ ಮುಂಚಿತವಾಗಿ ಎಂಒಈಎಫ್ ವೆಬ್ಸೈಟ್ ಮೇಲೆ ಅಪ್ಲೋಡ್ ಮಾಡಲಾಗಿದೆ ಎಂಬುದನ್ನು ಆ ಅಧಿಕಾರಿ ಖಚಿತಪಡಿಸಿಕೊಳ್ಳಬೇಕು.

Date of Order: August 29, 2013
Link: http://www.MoEF.nic.in/sites/default/files/OM-reg-sTorage-of-files-29.8.13.pdf

 

ಹೆಚ್ಚಿನ ಮಾಹಿತಿ ಸಲ್ಲಿಕೆ:

ಯೋಜನೆಯ ಪ್ರತಿಪಾದಕರಿಗೆ ಈಎಸಿ ಯಾವುದಾದರು ಮಾಹಿತಿ ಸಲ್ಲಿಕೆಗೆ ಕೇಳಿದರೆ, ಅದನ್ನು ಈಎಸಿ ಸಭೆ ದಿನಾಂಕದ 6 ತಿಂಗಳೊಳಗಾಗಿ ಸಲ್ಲಿಸಬೇಕು. ಈ ಅವಧಿಯ ನಂತರ, ಮಾಹಿತಿಯನ್ನು ಸಲ್ಲಿಸದೇ ಹೋದರೆ, ಈ ಯೋಜನೆಯನ್ನು ಬಾಕಿ ಉಳಿದಿರುವ ಯೋಜನೆಗಳ ಪಟ್ಟಿಯಿಂದ ಕೈಬಿಡಲಾಗುವುದು. ಮಾಹಿತಿಗಾಗಿ ಈಎಸಿ ಕೋರಿಕೆ ಮಾಡಿದ ದಿನದಿಂದ ಮೂರು-ಆರು ತಿಂಗಳವರಗೆ ಅದು ಬಾಕಿಯಲ್ಲಿದ್ದರೆ, ಅದನ್ನು ಇನ್ನೊಂದು ತಿಂಗಳೊಳಗೆ ಕೊಡುವಂತೆ ಯೋಜನೆಯ ಪ್ರತಿಪಾದಕರಿಗೆ ಒಂದು ಜ್ಞಾಪನೆಯನ್ನು ಕಳಿಸಬಹುದು. ಒಂದು ವೇಳೆ ಯೋಜನೆಯ ಪ್ರತಿಪಾದಕರು ಹಾಗೆ ಮಾಡಲು ವಿಫಲರಾದರೆ, ಆ ಯೋಜನೆಯನ್ನು ಬಾಕಿ ಉಳಿದಿರುವ ಯೋಜನೆಗಳ ಪಟ್ಟಿಯಿಂದ ಕೈಬಿಡಲಾಗುವುದು.

Date: 30 October 2012
Link:http://MoEF.nic.in/assets/ia-30102012.pdf

ಯೋಜನೆಯ ಕಾಗದಪತ್ರಗಳ ಸಾಫ್ಟ್ ಪ್ರತಿಗಳನ್ನು ಸಲ್ಲಿಸಬೇಕು:

ಹಾರ್ಡ್ ಪ್ರತಿಗಳಿಗೆ ಜೊತೆಯಾಗಿ, ಯೋಜನೆಯ ಪ್ರತಿಪಾದಕರು ಈ ಮುಂದಿನ ಕಾಗದಪತ್ರಗಳನ್ನು ಎಂಒಈಎಫ್/ಎಸ್ಈಐಎಎ ಗೆ ಪಿಡಿಎಫ್ ರೂಪದ ಸಾಫ್ಟ್ ಪ್ರತಿಗಳಂತೆ ಸಲ್ಲಿಸಬೇಕು:

  • ಫಾರ್ಮ್ 1
  • ಪೂರ್ವ ಕಾರ್ಯಸಾಧ್ಯತಾ ವರದಿ
  • ಕರಡು ಟಿಓಆರ್
  • ಈಐಎ
  • ಈಐಎ ಯೋಜನೆಗಳಿಗಾಗಿ ಉತ್ತರಿಸಲಾದ ಪ್ರಶ್ನೆಮಾಲಿಕೆ
  • ಸಾರ್ವಜನಿಕ ವಿಚಾರಣೆಯ ನಡಾವಳಿಗಳು
  • ಈಎಸಿಯ ನಿದರ್ಶನದಲ್ಲಿ ಕೈಗೊಳ್ಳಲಾದ ಎಲ್ಲಾ ಅಧ್ಯಯನ ವರದಿಗಳು
  • ಯೋಜನೆಯ ಪ್ರತಿಪಾದಕರು ಈಎಸಿಗೆ ಸಲ್ಲಿಸಿದ ಯಾವುದೇ ಹೆಚ್ಚುವರಿ ಮಾಹಿತಿ

ಎಂಒಈಎಫ್/ಎಸ್ಈಐಎಎ ವೆಬ್ಸೈಟ್ಗಳಲ್ಲಿ ಈ ಕಾಗದಪತ್ರಗಳನ್ನು ಅಪ್ಲೋಡ್ ಮಾಡುವುದನ್ನು ಇದು ಸುಲಭವಾಗಿಸುತ್ತದೆ. ಸಾಫ್ಟ್ ಮತ್ತು ಹಾರ್ಡ್ ಪ್ರತಿಗಳಿಲ್ಲದೆ ಸಲ್ಲಿಸಲಾಗುವ ಯಾವುದೇ ಮಾಹಿತಿಯನ್ನು ಅಪೂರ್ಣ ಎಂದು ಪರಿಗಣಿಸಿ ಅದನ್ನು ಮುಂದಿನ ಕ್ರಮಕ್ಕೆ ತೆಗೆದುಕೊಳ್ಳುವುದಿಲ್ಲ. ಈಎಸಿ ಮತ್ತು ಎಸ್ಈಐಎಎನ ಸದಸ್ಯ ಕಾರ್ಯದರ್ಶಿಗಳು ಈ ಕಾಗದಪತ್ರಗಳನ್ನು ಈಎಸಿ/ಎಸ್ಈಎಸಿ ಸೈಟ್ ಭೇಟಿಯ ವರದಿಗಳೊಂದಿಗೆ ಅಪ್ಲೋಡ್ ಮಾಡಬೇಕು.

Date: March 20, 2012
Link: http://envfor.nic.in/downloads/public-information/order-20032012-a.pdf

 

ಸರಿಯಾದ & ಮೂಲ ಮಾಹಿತಿ ಕೊಡುವುದು:

ಕಾಪಿ ಮಾಡಲಾದ ವಿವರ ಅಥವಾ ಮಾಹಿತಿಯನ್ನು ಪರೀಕ್ಷಿಸಲು ಒಂದು ಈಐಎನ ವಿಷಯಗಳನ್ನು ಮತ್ತೊಂದರೊಂದಿಗೆ ಹೋಲಿಸಲು ಎಂಒಈಎಫ್ ಅಥವಾ ಈಎಸಿಗೆ ತುಂಬಾ ಸಮಯ ಹಿಡಿಯುತ್ತದೆಯಾದ್ದರಿಂದ ಈಐಎನಲ್ಲಿ ಸರಿಯಾದ ವಿವರವನ್ನು ಸಲ್ಲಿಸುವ ಹೊಣೆ ಯೋಜನೆಯ ಪ್ರತಿಪಾದಕರದಾಗಿರುತ್ತದೆ. ಆದ್ದರಿಂದ, ಯೋಜನೆಯ ಪ್ರತಿಪಾದಕರುಈಐಎನ ವಿಷಯಗಳಿಗೆ ಜವಾಬ್ದಾರಿ ಹೊತ್ತು, ಈಐಎ ವರದಿಯಲ್ಲಿ ಹೊಣೆಗಾರಿಕೆಯನ್ನು ಸಲ್ಲಿಸಬೇಕಾಗುತ್ತದೆ. ಈಐಎಯಲ್ಲಿನ ಬೇರೆ ವರದಿಗಳಿಂದ ಮಾಹಿತಿಯನ್ನು ಕದಿಯಲಾಗಿದೆ ಎಂಬುದನ್ನು ಯಾವುದೇ ಹಂತದಲ್ಲಿ ಎಂಒಈಎಫ್ ಗಮನಕ್ಕೆ ತಂದರೆ, ಯೋಜನೆಯನ್ನು ತಡಮಾಡದೆ ತಿರಸ್ಕರಿಸಲಾಗುವುದು. ಆಗ ಯೋಜನೆಯ ಪ್ರತಿಪಾದಕರುಈಸಿಗೆ ಹೊಸದಾಗಿ ಅರ್ಜಿ ಸಲ್ಲಿಸಬೇಕು. ಒಂದು ವೇಳೆ, ಕಾಪಿ ಮಾಡಲಾದ  ಈಐಎ ವರದಿಯ ಆಧಾರದ ಮೇಲೆ ಈಸಿ ನೀಡಲಾಗಿದ್ದರೆ, ಅದನ್ನು ರದ್ದುಗೊಳಿಸಲಾಗುವುದು. ಅಂತಹ ಸಂದರ್ಭದಲ್ಲಿ ಅನುಮೋದನೆ ಪಡೆಯುವ ಪ್ರಕ್ರಿಯೆಯನ್ನು ಮತ್ತೊಮ್ಮೆ ಹೊಸದಾಗಿ ಆರಂಭಿಸಬೇಕು.

ಮುಂದೆ, ಆ ಈಐಎ ಕನ್ಸಲ್ಟೆಂಟನ್ನು ಮಾನ್ಯತೆ ಪಡೆದ ಕನ್ಸಲ್ಟೆಂಟ್ ಗಳ ಪಟ್ಟಿಯಿಂದ ಕೈಬಿಡಲಾಗುವುದು.

Date: October 5, 2011
Link:http://envfor.nic.in/downloads/public-information/OM_IA_ownershipEIA.pdf

 

2. ಕಲ್ಲಿದ್ದಲು ಸಂಯೋಜನೆ

ಈಸಿ/ಎಫ್ಸಿ ಹೊಂದಿರುವ ಕೋಲ್ ಇಂಡಿಯಾ ಅಥವಾ ಸಿಂಗರೇನಿ ಕೊಲ್ಲಿಯರೀಸ್ ಕಂಪನಿಯ ಕಲ್ಲಿದ್ದಲು ಬುಟ್ಟಿಗಳ ದೇಶೀಯ ಕಲ್ಲಿದ್ದಲಿನ ಮೇಲೆ ಅವಲಂಬಿತವಾದ ಉಷ್ಣ ವಿದ್ಯುತ್ ಸ್ಥಾವರಗಳಿಗೆ, ಬುಟ್ಟಿಯಲ್ಲಿನ ಕಲ್ಲಿದ್ದಲಿನ ಉಷ್ಣಪರಿಮಾಣ ಮೌಲ್ಯ, ಬೂದಿ ಮತ್ತು ಗಂಧಕ ಪದಾರ್ಥಗಳನ್ನು ಈಐಎ/ಈಎಂಪಿಯಲ್ಲಿ ನಮೂದಿಸಿದರೆ ಮಾತ್ರ ಈಸಿಗಾಗಿ ಸಲ್ಲಿಸಲಾಗುವ ಪ್ರಸ್ತಾವನೆಯನ್ನು ಪರಿಗಣಿಸಲಾಗುವುದು.

ಉದ್ದೇಶಿತ ಯೋಜನೆಗೆ ಒಪ್ಪಿಗೆ ಕೊಡಲು ಕಲ್ಲಿದ್ದಲು ಸಂಯೋಜನೆ ಅತ್ಯಗತ್ಯ. ಕಲ್ಲಿದ್ದಲು ಸಚಿವಾಲಯದ ಸ್ಥಾಯಿ ಸಂಯೋಜನೆ ಸಮಿತಿ ಸೂಚಿಸಿರುವಂತೆ, ಇಂಧನ ಪೂರೈಕೆ ಒಪ್ಪಂದ ಅಥವಾ ನಿರ್ದಿಷ್ಟ ಗಣಿ/ ಗಣಿಗಳ ಬುಟ್ಟಿ/ ಮೀಸಲಾದ ಕಲ್ಲಿದ್ದಲು ಬ್ಲಾಕ್ ನೊಂದಿಗೆ ಸಂಯೋಜನೆ ಹೊಂದಿರಬೇಕು. ಆ ಸಂಯೋಜನೆಯು ಕಲ್ಲಿದ್ದಲಿನ ಬೂದಿ ಮತ್ತು ಗಂಧಕ ಪದಾರ್ಥವನ್ನು ಅದರ ಉಷ್ಣಪರಿಮಾಣ ಮೌಲ್ಯಕ್ಕೆ ಹೊರತಾಗಿ ಒದಗಿಸಬೇಕು. ಯೋಜನೆಗಾಗಿ ಈಐಎ ಸಿದ್ಧಪಡಿಸುವಾಗ ಕಲ್ಲಿದ್ದಲಿನ ಈ ಗುಣಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.

ನಂತರ, ಕಲ್ಲಿದ್ದಲಿನ ಈ ಯಾವುದೇ ನಿಯತಾಂಕಗಳಲ್ಲಿ ಬದಲಾವಣೆಯಾಗಿದ್ದರೆ, ಅದನ್ನು ಈಸಿಯ ನಿಯಮಗಳನ್ನು ಪುನರಾವಲೋಕನೆಗೆ ಮತ್ತು ಅರ್ಹತೆ ಪರಿಶೀಲನೆಗೆ ಎಂಒಈಎಫ್ ಗೆ ಉಲ್ಲೇಖಿಸಬೇಕು. ಇವುಗಳಲ್ಲಿ ಸಲ್ಫರ್ ಆಕ್ಸೈಡ್ ಹೊರಸೂಸುವಿಕೆಯ ನಿಯಂತ್ರಣಕ್ಕೆ ಫ್ಲೂ ಗ್ಯಾಸ್ ಡಿಸಲ್ಫ್ಯೂರೈಸೇಶನ್ ಗಾಗಿ ವ್ಯವಸ್ಥೆಗಳು ಸೇರಿದಂತೆ ಹೆಚ್ಚಿನ ನಿಯಮಗಳು ಒಳಗೊಂಡಿರಬಹುದು.

Date: 19 April 2012
Link: http://envfor.nic.in/downloads/public-information/notif-20042012.pdf

 

ಕಲ್ಲಿದ್ದಲು ಸಂಯೋಜನೆಯು ಈಐಎ ವರದಿಯಲ್ಲಿ ಬೇಕಾಗುತ್ತದೆ ಹೊರತು ಉಲ್ಲೇಖಾ ನಿಬಂಧನೆಗಳ ಪ್ರಕಟಣೆಗೆ ಅಲ್ಲ.

Date: 19 January 2011
Link: http://envfor.nic.in/downloads/public-information/Cir-19-01-2011.pdf

 

3. ಅಲ್ಟ್ರಾ ಮೆಗಾ ವಿದ್ಯುತ್ ಯೋಜನೆಗಳು (ಯುಎಂಪಿಪಿ)

ಅತಿಕ್ರಮಿಸಿಲ್ಲದ ಪ್ರದೇಶಗಳು ಎಂದರೆ ಅಲ್ಲಿ ಕೆಲವು ಕೈಗಾರಿಕಾ ಚಟುವಟಿಕೆಗಳಿಗೆ ಅನುಮತಿ ಇರುವುದಿಲ್ಲ. ಒಂದು ಯುಎಂಪಿಪಿಗೆ ಸಂಯೋಜನೆಗೊಂಡಿರುವ ಒಂದು ಕಲ್ಲಿದ್ದಲು ಬ್ಲಾಕ್ ಅತಿಕ್ರಮಿಸಿಲ್ಲದ ಪ್ರದೇಶದಲ್ಲಿ ಇಲ್ಲದಿದ್ದರೆ, ಈಸಿಗೆ ಸಂಯೋಜನೆಗೊಂಡಿಲ್ಲದೆಯೆ ಆ ಯುಎಂಪಿಪಿಗೆ ಈಸಿಯನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುವುದು & ಕಲ್ಲಿದ್ದಲು ಹಂಚಿಕೆಗೆ ಸ್ಟೇಜ್ 1 ಎಫ್ಸಿ ಅಗತ್ಯ.

ಆಮದು ಮಾಡಿಕೊಳ್ಳಲಾದ ಕಲ್ಲಿದ್ದಲು ಬಳಸುವ ಯುಎಂಪಿಪಿಗಳಿಗೆ, ಈ ಮುಂದಿನ ನಿಯತಂಕಗಳು ಕಡ್ಡಾಯವಾಗಿ ಬೇಕು:

ಒಟ್ಟು ಉಷ್ಣಪರಿಮಾಣ ಮೌಲ್ಯ (ಕೆಸಿಎಎಲ್/ಕೆಜಿ)    – 5000 ಕನಿಷ್ಟ
ಬೂದಿ ಪದಾರ್ಥ                                        – 12% ಗರಿಷ್ಟ
ಗಂಧಕ ಪದಾರ್ಥ                                       – 0.8% ಗರಿಷ್ಟ

ಈಸಿಯ ಸಿಂಧುತ್ವವು ಈ ನಿಯತಾಂಕಗಳ ಅನುಸರಣೆಗೆ ಒಳಪಟ್ಟಿರುತ್ತದೆ.

ಈ ಯೋಜನೆಗಳ ಈಐಎ/ಈಎಂಪಿಗಳಲ್ಲಿ ಈ ಮುಂದಿನ ವಿವರಗಳು ಸಹ ಒಳಗೊಂಡಿರಬೇಕು:

  • ಆಮದು ಮಾಡಿಕೊಳ್ಳಲಾದ ಕಲ್ಲಿದ್ದಲಿಗೆ ಬಂದರು, ಬಂದರು ಕಾಪು, ರೇಲ್ವೆ ಮಾರ್ಗ ಬೇಕಾಗುತ್ತದೆ
  • ಬಂದರಿನ ಕಲ್ಲಿದ್ದಲು ನಿರ್ವಹಣಾ ಸಾಮರ್ಥ್ಯ
  • ಬಂದರಿನಿಂದ ಸ್ಥಾವರಕ್ಕೆ ಕಲ್ಲಿದ್ದಲು ಸಾಗಾಣಿಕೆ
Date of Order 1 - 30December 2013
Link: http://MoEF.nic.in/sites/default/files/OM%2030.12.2013.pdf
Date of Order 2 - February 5, 2013
Link: http://MoEF.nic.in/assets/om-050513.pdf

 

4. ಈಸಿ/ಎಫ್ಸಿ/ಸಿಆರ್ಝಡ್ ಉಲ್ಲಂಘನೆ

ಯೋಜನೆಯ ಪ್ರತಿಪಾದಕರು ಯೋಜನೆಗಾಗಿ ಅರಣ್ಯವಲ್ಲದ ಭೂಮಿಯನ್ನು ಗುರುತಿಸಲು ಪ್ರಯತ್ನಿಸಬೇಕು. ಅದು ಸಾಧ್ಯವಾಗದಿದ್ದರೆ, ಅರಣ್ಯ ಭೂಮಿ ಬದಲಿಕೆಗೆ ಒಪ್ಪಿಗೆ ಕೋರಿ ಫಾರ್ಮ್ 1 ಸಲ್ಲಿಕೆಗೆ ಮುಂಚಿತವಾಗಿ ಮೊದಲು ಅರ್ಜಿ ಸಲ್ಲಿಸಬೇಕು. ಅಂತಹ ಯೋಜನೆಗಳಿಗೆ ಅರಣ್ಯ ಭೂಮಿ ಬದಲಿಕೆಗೆ (ಅರಣ್ಯ ಸಂರಕ್ಷಣಾ ಕಾಯ್ದೆ, 1980ರ ಅಡಿಯಲ್ಲಿ) 1ನೇ ಹಂತದ ಅನುಮೋದನೆ ಸಿಕ್ಕಿದ ನಂತರವಷ್ಟೇ ಈಸಿಯನ್ನು ಕೊಡಬೇಕು.

  • ಯೋಜನೆಯ ಪ್ರತಿಪಾದಕರು ನ್ಯಾಯಸಮ್ಮತವಾದ ಸಿಆರ್ಝಡ್ ಅಥವಾ ಎಫ್ಸಿ ಅಥವಾ ಈಸಿ ಇಲ್ಲದೆ ಅಥವಾ ಅದರಲ್ಲಿನ ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣ ಕಾರ್ಯ ನಡೆಸಿದ್ದರೆ, ಅಗತ್ಯದ ಒಪ್ಪಿಗೆ ಪಡೆಯುವವರಗೆ ಅಥವಾ ಅದಕ್ಕೆ ತಿದ್ದುಪಡಿ ಪಡೆಯುವವರಗೆ ಯಥಾಸ್ಥಿತಿಯ ಹಂತದಲ್ಲಿ ನಿರ್ಮಾಣ ಚಟುವಟಿಕೆಗಳ ರದ್ದತಿಗೆ ಎಂಒಈಎಫ್ ಆದೇಶಿಸಬೇಕು.
  • ಯೋಜನೆಯ ಪ್ರತಿಪಾದಕರು ಸಿಆರ್ಝಡ್/ಎಫ್ಸಿ ಅನುಮತಿ ಕೊಟ್ಟಿರುವ ಸಾಮರ್ಥ್ಯಕ್ಕೆ ಮೀರಿ ಉತ್ಪಾದನೆಯಲ್ಲಿ ತೊಡಗಿದ್ದರೆ, ವಿಸ್ತೃತ ಮೊತ್ತಕ್ಕೆ ಅನುಮತಿ ಪಡೆಯುವವರಗೆ ಒಪ್ಪಿಗೆ ಪಡೆದಿರುವಷ್ಟೇ ಸಾಮರ್ಥ್ಯದ ಉತ್ಪಾದನೆಗೆ ಸೀಮಿತಗೊಳ್ಳಲು ಪ್ರತಿಪಾದಕರಿಗೆ ಎಂಒಈಎಫ್ ಆದೇಶಿಸಬೇಕು.
  • ಸ್ಥಾವರವು ಸಿಆರ್ಝಡ್/ಎಫ್ಸಿ ಇಲ್ಲದೆಯೆ ಕಾರ್ಯನಿರ್ವಹಿಸುತ್ತಿದ್ದರೆ, ಅನುಮತಿಗಳನ್ನು ಪಡೆಯುವವರೆಗೂ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಎಂಒಈಎಫ್ ಆದೇಶಿಸಬೇಕು.
  • ಯೋಜನೆಯ ಆಧುನೀಕರಣ ಅಥವಾ ಅದರ ಉತ್ಪನ್ನ ಮಿಶ್ರಣದ ಬದಲಾವಣೆಯನ್ನು ಅದಕ್ಕಾಗಿ ಒಪ್ಪಿಗೆ ಪಡೆಯುವವರಗೆ ಎಂಒಈಎಫ್ ತಡೆಯಬೇಕು. ಅಂತಹ ಆಧುನೀಕರಣ/ಬದಲಾವಣೆಗೆ ಒಪ್ಪಿಗೆ ಪಡೆಯುವವರಗೆ ಅದಕ್ಕಿಂತ ಮುಂಚಿನ ಯಥಾಸ್ಥಿತಿ ಕಾಯ್ದಕೊಳ್ಳಬೇಕು.

ಎಂಒಈಎಫ್ಗೆ, ಈ ಆದೇಶಗಳನ್ನು ನೀಡುವ ಜವಾಬ್ದಾರಿ ಕೊಡಲಾಗಿದೆ, ಜೊತೆಗೆ ಯೋಜನೆಯ ಪ್ರತಿಪಾದಕರಿಂದ ಅವುಗಳ ಅನುಸರಣೆಯ ಒಪ್ಪಿಗೆ ಪಡೆಯುವುದು ಅವರ ಜವಾಬ್ದಾರಿಯಾಗಿರುತ್ತದೆ, ಈ ಮೇಲೆ ಕೊಟ್ಟಿರುವ ನಿರ್ದೇಶನಗಳನ್ನು ಯಾವುದೇ ರೀತಿಯಲ್ಲಿ ಉಲ್ಲಂಘಿಸಿದರೆ, ಈಪಿಎ 1986ನ ನಿಬಂಧನೆಗಳಡಿ ಯೋಜನೆಯ ಪ್ರತಿಪಾದಕರ ವಿರುದ್ಧ ಎಂಒಈಎಫ್ ಕಾನೂನು ಕ್ರಮ ಜರುಗಿಸಬಹುದು ಮತ್ತು ತಡಮಾಡದೆ ಅನುಮೋದನೆಗಳನ್ನು ತಿರಸ್ಕರಿಸಬಹುದು.

Date of Order: June 27th 2013
Link: http://www.MoEF.nic.in/sites/default/files/om-270613.pdf

 

ಒಪ್ಪಿಗೆ ಇಲ್ಲದೆ ಕಾರ್ಯನಿರ್ವಹಣೆ:

ಯಾವುದೇ ಸ್ಥಾವರವು ಅಗತ್ಯ ಸಿಆರ್ಝಡ್/ಈಸಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಕುರಿತು ಎಂಒಈಎಫ್ ದೂರುಗಳನ್ನು ಸ್ವೀಕರಿಸಿದರೆ, ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ, ರಾಜ್ಯ ಸರ್ಕಾರ ಅಥವಾ ಎಂಒಈಎಫ್ ಪ್ರಾದೇಶಿಕ ಕಚೇರಿಗಳು ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತವೆ. ಯೋಜನೆಯ ಪ್ರತಿಪಾದಕರು 60 ದಿನಗಳೊಳಗೆ ಈ ವಿಷಯವನ್ನು ನಿರ್ದೇಶಕ ಮಂಡಳಿಯ (ಕಂಪನಿಗಳು) ಅಥವಾ ಸಿಈಓ (ಟ್ರಸ್ಟ್ಗಳು) ಗಮನಕ್ಕೆ ತರಬೇಕು ಮತ್ತು ಅವರಿಂದ ಮತ್ತೆ ಉಲ್ಲಂಘಿಸುವುದಿಲ್ಲ ಎಂಬ ಅಧಿಕೃತ ನಿರ್ಣಯ ಪಡೆಯಬೇಕು. ಈ ಮಧ್ಯೆ, ಎಂಒಈಎಫ್ ಆ ಯೋಜನೆಯನ್ನು ಪಟ್ಟಿಯಿಂದ ತೆಗೆದುಹಾಕುವುದು. ಯೋಜನೆಯ ಪ್ರತಿಪಾದಕರ ವಿವರಗಳು ಮತ್ತು ನಿರ್ಣಯದ ಪ್ರತಿಯನ್ನು ಎಂಒಈಎಫ್ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗುವುದು.

60 ದಿನಗಳೊಳಗಾಗಿ ಯಾವುದೇ ಪ್ರತಿಕ್ರಿಯೆ ಬರದಿದ್ದರೆ, ಯೋಜನೆಯ ಪ್ರತಿಪಾದಕರಿಗೆ ಯೋಜನೆಯನ್ನು ಮುಂದುವರಿಸುವ ಆಸಕ್ತಿ ಇಲ್ಲವೆಂದು ಭಾವಿಸಿ ಫೈಲನ್ನು ಮುಚ್ಚಲಾಗುವುದು. ಯೋಜನೆಯ ಪ್ರತಿಪಾದಕರಿಗೆ ಇನ್ನೂ ಯೋಜನೆಯಲ್ಲಿ ಆಸಕ್ತಿ ಇದ್ದರೆ ಎಲ್ಲಾ ಕ್ರಮಗಳನ್ನು ಹೊಸದಾಗಿ ಪ್ರಾರಂಭಿಸಬೇಕು.

ರಾಜ್ಯ ಸರ್ಕಾರಗಳು ಉಲ್ಲಂಘನೆ ಅವಧಿಗಾಗಿ ಯೋಜನೆಯ ಪ್ರತಿಪಾದಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿಶ್ವಾಸಾರ್ಹ ಕ್ರಮ ತೆಗೆದುಕೊಳ್ಳುವುದನ್ನು ಪ್ರಾರಂಭಿಸಬೇಕು. ನಂತರ ಅದು ವಿಶ್ವಾಸಾರ್ಹ ಕ್ರಮ ತೆಗೆದುಕೊಂಡಿರುವ ಸಾಕ್ಷಿಯನ್ನು ಎಂಒಈಎಫ್ಗೆ ಕೊಡಬೇಕು.

ಉಲ್ಲಂಘನೆ/ಗಳ ಮೇಲೆ ಕ್ರಮ ಜರುಗಿಸಿದ ನಂತರ, ಒಪ್ಪಿಗೆ ಪಡೆಯಲು ಅನುಸರಿಸಲಾಗುವ ಸಾಮಾನ್ಯ ವಿಧಾನವನ್ನು ಅಳವಡಿಸಲಾಗುವುದು. ಆದರೆ, ಇಂತರ ಪ್ರಕರಣಗಳಿಗೆ ಟಿಒಆರ್ ಅಥಾವ ಈಸಿ ಕೊಡುವುದು ಯೋಜನೆಯ ಪ್ರತಿಪಾದಕರಿಗೆ ಹಕ್ಕಿನ ವಿಷಯವಾಗುವುದಿಲ್ಲ. ಉಲ್ಲಂಘನೆಯ ಸ್ವಭಾವ ಗಂಭೀರವಾಗಿದ್ದರೆ, ಸಚಿವಾಲಯವು ಪ್ರಸ್ತಾವನೆಯನ್ನು ಸಾರಾಸಗಟಾಗಿ ತಿರಸ್ಕರಿಸಬಹುದು.

Date: 12 December 2012
Link: http://MoEF.nic.in/assets/om-12122012-b.pdf

 

5. ಸಾರ್ವಜನಿಕ ವಿಚಾರಣೆ

ಪ್ರಕಟಣೆ:

ವಿವಿಧ ಯೋಜನೆಗಳಿಗೆ ಸಂಬಂಧಪಟ್ಟ ವಿಚಾರಣೆಗಳನ್ನು ಸೂಚಿಸಿದ ದಿನಾಂಕದಂದು ಒಂದೇ ಸಮಯದಲ್ಲಿ ನಡೆಸಲಾಗುವುದಿಲ್ಲ. ಎರಡು ವಿಚಾರಣೆಗಳು ಒಂದೇ ದಿನಕ್ಕೆ ನಿಗದಿತವಾಗಿದ್ದರೆ, ಅವುಗಳ ನಡುವೆ ಸಾಕಷ್ಟು ಸಮಯ ಕೊಟ್ಟಿರಬೇಕು.

ವಿಚಾರಣೆಗಾಗಿ ಎಸ್ಪಿಸಿಬಿ ನೀಡುವ ಪ್ರಕಟಣೆಗಳ ವಿವರಗಳನ್ನು ಸಾರ್ವಜನಿಕ ವಿಚಾರಣೆ ನಡಾವಳಿಗಳು ನಮೂದಿಸಬೇಕು. ಎಸ್ಪಿಸಿಬಿ ತಾನು ಅರ್ಹವಾದ ಪ್ರಕ್ರಿಯೆಗಳನ್ನು ಅನುಸರಿಸಿರುವುದಾಗಿ ಪ್ರಮಾಣೀಕರಿಸಬೇಕು.

April 19, 2010
Link: http://envfor.nic.in/divisions/iass/Cir/pub_hear_EIA.pdf

 

ಎಸ್ಈಝಡ್‎ಗಳಲ್ಲಿ ಸಾರ್ವಜನಿಕ ವಿಚಾರಣೆ

ಒಂದು ಎಸ್ಈಝಡ್‎ಗೆ ಸಮಗ್ರವಾಗಿ ಸಾರ್ವಜನಿಕ ವಿಚಾರಣೆ ಇದ್ದರೆ, ಅದರ ಪ್ರತ್ಯೇಕ ಘಟಕಗಳಿಗೆ ಮತ್ತೊಂದು ವಿಚಾರಣೆ ನಡೆಸುವುದರಿಂದ ವಿನಾಯಿತಿ ಕೊಡಬಹುದಾಗಿದೆ. ಆದರೆ ಈ ಮುಂಚಿನ ಸಾರ್ವಜನಿಕ ವಿಚಾರಣೆ ಸಂದರ್ಭದಲ್ಲಿ ಎಸ್ಈಝಡ್‎ನ ಭಾಗವಲ್ಲದ ಯಾವುದೇ ರೀತಿಯ ಪ್ರತ್ಯೇಕ ಘಟಕ/ಪ್ರಕ್ರಿಯೆಗಾಗಿ ಹೊಸ ವಿಚಾರಣೆಯನ್ನು ನಡೆಸಬೇಕಾಗುತ್ತದೆ.

Date: November 1, 2012
Link: http://MoEF.nic.in/assets/ia-01112012.pdf

 

ಪಿಹೆಚ್ ನಡಾವಳಿಗಳನ್ನು ಅಪ್ಲೋಡ್ ಮಾಡುವುದು:

ಎಲ್ಲಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು/ ಕೇಂದ್ರಾಡಳಿತ ಪ್ರದೇಶದ ಮಾಲಿನ್ಯ ನಿಯಂತ್ರಣ ಆಯೋಗಗಳು ನಿಯಮಿತವಾಗಿ ಮತ್ತು ಆದ್ಯತೆಯ ಕಾರಣದಿಂದ ಸಾರ್ವಜನಿಕ ವಿಚಾರಣೆಯ ನಡಾವಳಿಗಳನ್ನು ತಂತಮ್ಮ ವೆಬ್ಸೈಟ್ಗಳಲ್ಲಿ ಪ್ರದರ್ಶಿಸಬೇಕು.

Date: March 20, 2012
Link: http://envfor.nic.in/downloads/public-information/order-20032012-b.pdf

 

6. ಅಸ್ತಿತ್ವದಲ್ಲಿರುವ ಸ್ಥಾವರಗಳ ಮೇಲ್ವಿಚಾರಣೆ

ಅಸ್ತಿತ್ವದಲ್ಲಿರುವ ಯೋಜನೆಗಳಲ್ಲಿ ಈಸಿ ನಿಯಮಗಳ ಅನುಪಾಲನೆಯ ಮೇಲ್ವಿಚಾರಣೆಗಾಗಿ ಸ್ಥಳಕ್ಕೆ ಭೇಟಿ ಕೊಡುವ ಎಂಒಈಎಫ್ ಪ್ರಾದೇಶಿಕ ಕಚೇರಿ ಅಧಿಕಾರಿಗಳು, ಈಸಿ ನಿಯಮಗಳ ಪಾರದರ್ಶಕ ಅನುಪಾಲನೆಯನ್ನು ಸಹ ಪರಿಶೀಲಿಸಬೇಕು. ಇದನ್ನು ಅವರು ತಮ್ಮ ಮೇಲ್ವಿಚಾರಣಾ ವರದಿಯಲ್ಲಿ ಸೇರಿಸಬೇಕು.

ಈಸಿ ಪತ್ರಗಳಲ್ಲಿ ಪಾರದರ್ಶಕತೆಯ ನಿಯಮವು ಸಾಮಾನ್ಯವಾಗಿ ಅನುಪಾಲನಾ ಸ್ಥಿತಿ ಮತ್ತು ಮೇಲ್ವಿಚಾರಣೆಯ ವಿವರವನ್ನು ಪ್ರತಿಪಾದಕರ ವೆಬ್ಸೈಟ್ ಮೇಲೆ ಅಪ್ಲೋಡ್ ಮಾಡಬೇಕೆನ್ನುನ ನಿಯಮವನ್ನು ಒಳಗೊಂಡಿರುತ್ತದೆ. ಇತ್ತೀಚಿನ ಅನುಪಾಲನಾ ವರದಿಯನ್ನು ಎಂಒಈಎಫ್/ಎಸ್ಈಐಎಎ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕು. ಎಲ್ಲಾ ಅನುಪಾಲನಾ ವರದಿಗಳು ಸಾರ್ವಜನಿಕ ದಾಖಲೆಗಳಾಗಿರುತ್ತವೆ.

Date: August 5, 2011
Link: http://envfor.nic.in/downloads/public-information/O.M-dated-05.08.2011.pdf

 

ಅಸ್ತಿತ್ವದಲ್ಲಿರುವ 500 ಮೆಗಾವ್ಯಾಟ್ಗೂ ಹೆಚ್ಚು ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರಗಳು, ತಮ್ಮ ಸ್ಥಾವರದ ಚಿಮಿಣಿಯ ಹೊರಸೂಸುವಿಕೆ ಮತ್ತು ತಮ್ಮ ಸ್ಥಾವರದಲ್ಲಿನ ಗಾಳಿಯ ಗುಣಮಟ್ಟದ ನಿರಂತರ ಮೇಲ್ವಿಚಾರಣೆ ನಡೆಸಬೇಕು. ಹೊರಸೂಸುವಿಕೆಯು ಅನುಮತಿಯ ಮಿತಿಯೊಳಗೇ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸರಿಪಡಿಸುವ ಕ್ರಮಗಳನ್ನು ಅಗತ್ಯ ಬಂದಾಗ ತೆಗೆದುಕೊಳ್ಳಬೇಕು.

ಆರು ಮಾಸಿಕ ಮೇಲ್ವಿಚಾರಣೆ ವರದಿಯನ್ನು ಎಸ್ಪಿಸಿಬಿ, ಎಂಒಈಎಫ್ ಪ್ರಾದೇಶಿಕ ಕಚೇರಿಗೆ ಸಲ್ಲಿಸಬೇಕು ಮತ್ತು ಯೋಜನೆಯ ಪ್ರತಿಪಾದಕರ ಕಂಪನಿ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕು. ಅಲ್ಲಿನ ಗಾಳಿಯ ಗುಣಮಟ್ಟದ ವಿವರ ಮತ್ತು ಚಿಮಿಣಿಯ ಹೊರಸೂಸುವಿಕೆ ವಿವರವನ್ನು ಕಂಪನಿಯ ಮುಖ್ಯ ದ್ವಾರದ ಹತ್ತಿರ ಎಲ್ಲರಿಗೂ ಕಾಣುವಂತೆ ಸಾರ್ವಜನಿಕವಾಗಿ ಪ್ರದರ್ಶಿಸಬೇಕು ಮತ್ತು ವಾಸ್ತವಿಕವಾಗಿ ಅಪ್ಡೇಟ್ ಮಾಡಬೇಕು.

Date: April 6, 2011
Link: http://envfor.nic.in/downloads/public-information/Addtnl-Con-mega-prjt.pdf

 

7. ಒಂದೇ ಭೂಮಿಯ ಮೇಲೆ ಯೋಜನೆಗಳು

ಎರಡು ಯೋಜನೆಗಳು ಒಂದೇ ಜಮೀನಿನ ಮೇಲೆ ಪರಿಸರೀಯ ಅನುಮೋದನೆಗಾಗಿ ಅರ್ಜಿ ಸಲ್ಲಿಸಿದ್ದರೆ, ಎರಡೂ ಯೋಜನೆಗಳನ್ನು ತಡೆಹಿಡಿಯಲಾಗುವುದು ಮತ್ತು ಈ ಕುರಿತು ಸಂಬಂಧಪಟ್ಟ ರಾಜ್ಯ ಸರ್ಕಾರಗಳ ಸಲಹೆ ಕೇಳಲಾಗುವುದು. ರಾಜ್ಯ ಸರ್ಕಾರ ಒಲವು ತೋರುವ ಯೋಜನೆಯನ್ನು ಪರಾಮರ್ಶನೆಗೆ ತೆಗೆದುಕೊಳ್ಳಲಾಗುವುದು ಮತ್ತು ನಂತರ ಈಐಎ ಕ್ರಮವಿಧಾನಗಳನ್ನು ಅನುಸರಿಸಲಾಗುವುದು.

Date: 8 June, 2011
Link: http://envfor.nic.in/downloads/public-information/App-rcvd-prcdr.pdf

 

8. ಕಾರ್ಪೊರೇಟ್ ಪರಿಸರ ನೀತಿ

ಎಲ್ಲಾ ಕೇಂದ್ರ ಸಾರ್ವಜನಿಕ ವಲಯ ಘಟಕಗಳು ಮತ್ತು 500 ಮೆಗಾವ್ಯಾಟ್ ಮತ್ತು ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಟಿಪಿಪಿಎಸ್ಗಳು, ಅರಣ್ಯ/ಪರಿಸರೀಯ ಅನುಮತಿ ನಿಯಮಗಳಿಗೆ ಬದ್ಧವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಕಾರ್ಪೊರೇಟ್ ಪರಿಸರ ನೀತಿಯನ್ನು ಅಳವಡಿಸಿಕೊಳ್ಳಬೇಕು. ಸಚಿವಾಲಯ ಅಥವಾ ಯಾವುದೇ ಸಾರ್ವಜನಿಕ ಪ್ರಾಧಿಕಾರವು ಈಸಿ ಮತ್ತು ಎಫ್ಸಿ ನಿಯಮಗಳ ಯಾವುದೇ ಉಲ್ಲಂಘನೆಯನ್ನು ಕಂಡುಹಿಡಿದರೆ ಅದನ್ನು ಅವುಗಳ ನಿರ್ದೇಶಕ ಮಂಡಳಿಗೆ ತಿಳಿಸಬೇಕು ಹಾಗು ಅದನ್ನು ಯೋಜನೆಯ ಪ್ರತಿಪಾದಕರ ವೆಬ್ಸೈಟ್ನಲ್ಲಿ ಮತ್ತು ವಾರ್ಷಿಕ ವರದಿಯಲ್ಲಿ ಘೋಷಿಸಬೇಕು. ಎಲ್ಲಾ ಯೋಜನಾ ಪ್ರಸ್ತಾವನೆಗಳಿಗೆ, ಈಎಸಿಯು ಕಾರ್ಪೊರೇಟ್ ಪರಿಸರ ನೀತಿಗೆ ಸಂಬಂಧಿಸಿದ ಅಂಶಗಳ ಬಗ್ಗೆ, ಅದರಲ್ಲೂ ಅವುಗಳ ಬದ್ಧತೆ ಮತ್ತು ವ್ಯಾಪ್ತತೆ ಕುರಿತು ಉದ್ದೇಶಪೂರ್ವಕವಾಗಿರಬೇಕು.

Date: 26 April 2011
Link: http://envfor.nic.in/downloads/public-information/corporate-env-res.pdf

 

9. ಈಸಿ ಹೊರಡಿಸುವುದಕ್ಕೆ ಮುಂಚೆ ಅನುಮತಿಸಲಾದ ಚಟುವಟಿಕೆಗಳು

ಅತಿಕ್ರಮ ಪ್ರವೇಶವನ್ನು ತಡೆಯಲು ಯೋಜನಾ ಸ್ಥಳಕ್ಕೆ ಬೇಲಿ ಹಾಕುವುದು

ಭದ್ರತಾ ಸಿಬ್ಬಂದಿಗಾಗಿ ತಾತ್ಕಾಲಿಕ ಶೆಡ್ಗಳ ನಿರ್ಮಾಣ

ಬೇರೆ ಯಾವುದೇ ಚಟುವಟಿಕೆ ನಡೆಸಿದರೆ, ಟಿಓಆರ್ ಅಮಾನತುಗೊಳಿಸಬಹುದು ಅಥವಾ ಹಿಂಪಡೆಯಬಹುದು ಮತ್ತು ಪರಿಸರ ಸಂರಕ್ಷಣೆ ಕಾಯ್ದೆ, 1986ರ ನಿಬಂಧನೆಗಳಡಿ ಯೋಜನೆ ಪ್ರತಿಪಾದಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಬಹುದು.

Date: 19 August, 2010
Link: http://envfor.nic.in/downloads/public-information/Act-prior-EC.pdf

 

10. ಯೋಜನೆ ವಿಸ್ತರಣೆ

ಹಿಂದಿನ ಹಂತದ ಅನುಷ್ಠಾನಕ್ಕಾಗಿ ಕೆಲಸಗಳು ಪ್ರಾರಂಭವಾಗಿದ್ದರೆ ಮಾತ್ರ ಯೋಜನೆ ವಿಸ್ತರಣೆಯ ಈಸಿಗಾಗಿ ಸಲ್ಲಿಸುವ ಪ್ರಸ್ತಾವನೆಯನ್ನು ಪರಿಗಣಿಸಲಾಗುವುದು. ಈ ಮುಂಚಿನ ಹಂತಕ್ಕೆ ಈಸಿ ಕೊಟ್ಟಿಲ್ಲದಿದ್ದರೆ, ಯೋಜನೆಯ ಪ್ರತಿಪಾದಕರು ಎಲ್ಲಾ ಹಂತಗಳನ್ನು ಒಂದಾಗಿಸಿ ಹೊಸದಾಗಿ ಈಸಿಗಾಗಿ ಅರ್ಜಿ ಸಲ್ಲಿಸಬೇಕು. ಉದರಿಂದ ಎಲ್ಲಾ ಪರಿಸರೀಯ ವಿಷಯಗಳನ್ನು ಸಮಗ್ರವಾಗಿ ನಿರ್ಣಯಿಸಬಹುದು.

Date: March 22, 2010
Link: http://envfor.nic.in/divisions/iass/Cir/EXP_EC.pdf

ಯೋಜನೆಯ ಪ್ರತಿಪಾದಕರು ಅಸ್ತಿತ್ವದಲ್ಲಿರುವ ಯೋಜನೆಯನ್ನು ವಿಸ್ತರಿಸಲು ಈಸಿಗಾಗಿ ಅರ್ಜಿ ಸಲ್ಲಿಸಿದಾಗ, ಈಸಿ ನಿಯಮಗಳ ಪಾಲನೆ ಕುರಿತು ಎಂಒಈಎಫ್ ಪ್ರಾದೇಶಿಕ ಕಚೇರಿಯಿಂದ ಪಡೆದ ಪ್ರಮಾಣೀಕೃತ ವರದಿಯನ್ನು ಸಹ ಸಲ್ಲಿಸಬೇಕು. ಈ ವರದಿ ಇಲ್ಲದೆ, ವಿಸ್ತರಣೆಗಾಗಿ ಸಲ್ಲಿಸುವ ಅರ್ಜಿಯನ್ನು ಅಂಗೀಕರಿಸುವುದಿಲ್ಲ. ಯೋಜನೆಯ ವಿಸ್ತರಣೆಯ ಮೌಲ್ಯೀಕರಣಗಾಗಿ ನಡೆಯುವ ಈಎಸಿ ಸಭೆಯಲ್ಲಿ ಈ ಅನುಸರಣೆ ವರದಿ ಕುರಿತು ಚರ್ಚಿಸಬೇಕು ಮತ್ತು ಅದನ್ನು ಸಭೆಯ ವಿವರಣೆಗಳಲ್ಲಿ ಸರಿಯಾಗಿ ನಮೂದಿಸಬೇಕು.

Date: May 30, 2012
Link: http://MoEF.nic.in/downloads/public-information/eia-300512.pdf

 

11. ಟಿಓಆರ್ ಸಿಂಧುತ್ವ

ಈಐಎ/ಈಎಂಪಿ ವರದಿಗಳ ಸಲ್ಲಿಕೆಗಾಗಿ 2 ವರ್ಷಗಳ ಸಿಂಧುತ್ವದೊಂದಿಗೆ ಟಿಓಆರ್ ಕೊಡಬೇಕು. ಈಎಸಿ/ಎಸ್ಈಎಸಿಯ ಸರಿಯಾದ ಸಮರ್ಥನೆ ಮತ್ತು ಅನುಮೋದನೆಯನ್ನು ಆಧರಿಸಿ ಮೂರು ವರ್ಷಗಳ ಹೊರ ಮಿತಿಯೊಂದಿಗೆ ವಿನಾಯಿತಿ ಕೊಡಬಹುದು.

March 22, 2010
Link: http://envfor.nic.in/divisions/iass/Cir/TOR_EC.pdf

 

12. ಪರಸ್ಪರ ಸಂಪರ್ಕ ಹೊಂದಿದ ಯೋಜನೆಗಳು

ಬಹು ವಲಯದ ಘಟಕಗಳನ್ನು ಹೊಂದಿರುವ ಸಮಗ್ರ ಮತ್ತು ಪರಸ್ಪರ ಸಂಪರ್ಕ ಹೊಂದಿದ ಯೋಜನೆಗಳು, ಪ್ರತಿಯೊಂದು ವಲಯದ ಈಎಸಿ/ಎಸ್ಈಎಸಿಗಳಿಂದ ಟಿಓಆರ್ಗಳನ್ನು ಪಡೆದ ನಂತರ, ಪ್ರತಿಯೊಂದು ಘಟಕವನ್ನು ಸಮಗ್ರವಾಗಿ ಒಳಗೊಂಡ ಒಂದು ಸಾಮುದಾಯಿಕ ಈಐಎ ವರದಿಯನ್ನು ತಯಾರಿಸಬೇಕು. ಪ್ರತಿಯೊಂದು ಈಎಸಿ/ಎಸ್ಈಎಸಿಗಳು ಈ ಸಾಮುದಾಯಿಕ ಈಐಎ ವರದಿಯನ್ನು ಒಟ್ಟಾಗಿ ಪರಿಗಣಿಸಬೇಕು. ಅವರ ಶಿಫಾರಸ್ಸಿನ ಆಧಾರದ ಮೇಲೆ, ನಿಯಂತ್ರಕ ಅಧಿಕಾರಿಗಳ ಏಕಕಾಲಿಕ ಅನುಮೋದನೆ ಪಡೆಯಲು ಪ್ರಸ್ತಾವನೆಗಳನ್ನು ಪ್ರತ್ಯೇಕ ಫೈಲ್ಗಳಂತೆ ಪರಿಶೀಲಿಸಲಾಗುವುದು.

Date: December 24, 2010
Link: http://envfor.nic.in/downloads/public-information/integrated-interlinked-prjt.pdf